ಎಪಿತೆಲಂತ
	ಗುಂಡಾಗಿರುವ ಕಳ್ಳಿಜಾತಿ. ಉತ್ತರ ಮೆಕ್ಸಿಕೊ ಮತ್ತು ದಕ್ಷಿಣ ಟೆಕ್ಸಾಸಿನ ಮೂಲವಾಸಿ. ಕಾಂಡದ ಮೇಲೆ ಮುಳ್ಳುಗಳು ಸಂಪೂರ್ಣವಾಗಿ ಕವಿದಿವೆ. ಸಸ್ಯದ ಮೇಲುಭಾಗದಲ್ಲಿ ದಾರವಿದೆ. ಬಲಿತ ಗಂಟುಗಳು ರಂಧ್ರಗಳಿಂದ ಹೂಕಾಣಿಸಿಕೊಳ್ಳುತ್ತದೆ. ಹೂ ಸಣ್ಣ ಬಿಳುಪು ಅಥವಾ ಕೆನೆಬಣ್ಣದ ನಕ್ಷತ್ರ ಆಕಾರದಲ್ಲಿದೆ. ಹಣ್ಣುಗಳು ಷಾಡ್ ಮಾದರಿಯವು. ಆಕಾರ ಗದೆಯಂತೆ. ಬಣ್ಣ ಕೆನೆ ಅಥವಾ ನಸುಗೆಂಪು. 

	ಎಪಿತೆಲಂತ ಮೈಕ್ರೊಮಿರಿಸ್ ಪ್ರಭೇದವನ್ನು ಅನೇಕ ಸಾರಿ ಮ್ಯಾಮಲೇರಿಯ ಕಳ್ಳಿಯೆಂದು ತಪ್ಪಾಗಿ ತಿಳಿಯುವ ಸಾಧ್ಯತೆ ಇದೆ. ಈ ಸಸ್ಯ ನಸುಗುಲಾಬಿ ಬಣ್ಣದ ಹೂ ಗಂಟುಗಳ ಕಂಕುಳುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸಸ್ಯ ಸಣ್ಣದಾಗಿ, ಗುಂಡಾಗಿದ್ದು ಬಿಳುಪು ಮಿಶ್ರಿತ ಹಳದಿಬಣ್ಣದ ಚಿಕ್ಕಮುಳ್ಳುಗಳಿಂದ ಆವೃತವಾಗಿದೆ.  							  
    (ಡಿ.ಎಂ.)